ರ್‍ಯಾಪಿಡ್‌ ಚೆಸ್‌: ಭಾರತಕ್ಕೆ 4 ಚಿನ್ನ ನವದೆಹಲಿ: ಯುಎಇಯ ಅಲ್‌ ಏಯಿನ್‌ನಲ್ಲಿ ನಡೆದ ಏಷ್ಯನ್ ಯೂತ್ ರ್‍ಯಾಪಿಡ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ. ಭಾಗ್ಯಶ್ರೀ ಪಾಟೀಲ (18 ವರ್ಷದೊಳಗಿನ ಬಾಲಕಿಯರು), ಸಪರಿಯಾ ಘೋಷ್‌ (14 ವರ್ಷದೊಳಗಿನ ಬಾಲಕಿಯರು), ಮುಹಮ್ಮದ್‌ ಶ್ಯಾನ್ ನೌಶೇ ಇಬ್ರಾಹಿಂ (8 ವರ್ಷದೊಳಗಿನ ಬಾಲಕರು) ಮತ್ತು ಶರ್ವಣಿಕಾ (8 ವರ್ಷದೊಳಗಿನ ಬಾಲಕಿಯರು) ಬಂಗಾರದ ಪದಕ ಗೆದ್ದರು. ಶೆರಳ್ಳಿ ಪಟ್ನಾಯಕ್ (8 ವರ್ಷದೊಳಗಿನ ಬಾಲಕಿಯರು), ಅರಿತ್ ಕಪಿಲ್ (8 ವರ್ಷದೊಳಗಿನ ಬಾಲಕರು) ಮತ್ತು ಕಿಯಾನಾ ಪರಿಹಾರ್ (8 ವರ್ಷದೊಳಗಿನ ಬಾಲಕಿಯರು) ಮೂರು ಬೆಳ್ಳಿ ಪದಕ ಜಯಿಸಿದರು. 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸೆರಾ ದಗಾರಿಯಾ ಮತ್ತು ದಿವಿ ಬಿಜೇಶ್ ಕಂಚಿನ ಪದಕ ಗೆದ್ದರು. ಗುರುವಾರದಿಂದ ಆರಂಭವಾಗಿರುವ ಕೂಟದಲ್ಲಿ ಭಾರತ ತಂಡದ 60 ಆಟಗಾರರು ಸ್ಪರ್ಧಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.