ಟಿಟಿ: ರಾಜ್ಯ ತಂಡಕ್ಕೆ ರಕ್ಷಿತ್‌, ಖುಷಿ ಸಾರಥ್ಯ ಬೆಂಗಳೂರು: ರಕ್ಷಿತ್ ಆರ್. ಬಾರಿಗಿಡದ ಮತ್ತು ವಿ. ಖುಷಿ ಅವರು ಇದೇ 16ರಿಂದ 22ರವರೆಗೆ ಹರಿಯಾಣದ ಪಂಚಕುಲದಲ್ಲಿ ನಡೆಯಲಿರುವ 85ನೇ ಸೀನಿಯರ್‌ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ. ತಂಡಗಳು: ಪುರುಷರು: ರಕ್ಷಿತ್ ಆರ್. ಬಾರಿಗಿಡದ (ನಾಯಕ), ಅನಿರ್ಬನ್ ರಾಯ್ ಚೌಧರಿ, ಎಂ.ಕಲೈವನನ್, ಪಿ. ಯಶವಂತ್, ಶ್ರೇಯಲ್ ತೆಲಂಗ್. ಮಹಿಳೆಯರು: ವಿ. ಖುಷಿ (ನಾಯಕಿ), ದೇಶ್ನಾ ಎಂ.ವಂಶಿಕಾ, ಅನರ್ಘ್ಯಾ ಮಂಜುನಾಥ್, ಯಶಸ್ವಿನಿ ಘೋರ್ಪಡೆ, ತೃಪ್ತಿ ಪುರೋಹಿತ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.