ಜೂಡೊ: ಅಂಧ ವಿದ್ಯಾರ್ಥಿಗೆ ಕಂಚು ಬೆಂಗಳೂರು: ಇಲ್ಲಿನ ಆಚಾರ್ಯ ಪಾಠಶಾಲಾ ಎಜುಕೇಷನಲ್‌ ಟ್ರಸ್ಟ್‌ ಸಂಸ್ಥೆಯ ದ್ವಿತೀಯ ಪಿಯುಸಿಯ ಅಂಧ ವಿದ್ಯಾರ್ಥಿ ನೂರ್ ಅಬ್ಜಲ್‌ ಅವರು ಪಂಜಾಬ್‌ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿದ್ದಾರೆ. ಇದೇ ಸಂಸ್ಥೆಯ ದ್ವಿತೀಯ ಬಿಕಾಂನ ಅಂಧ ವಿದ್ಯಾರ್ಥಿ ಆರ್‌.ಶಾಬಾಜ್ ಅಹಮ್ಮದ್‌ ಅವರೂ ರಾಷ್ಟ್ರೀಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಇವರಿಬ್ಬರು ಟಿಸಿಎಸ್‌ ವಿಶ್ವ 10ಕೆ ಓಟದಲ್ಲಿ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.