8 ವರ್ಷಗಳ ಬಳಿಕ ರಾಷ್ಟ್ರೀಯ ಕೂಟಕ್ಕೆ ದೀಪಾ ಕರ್ಮಾಕರ್‌ ಭುವನೇಶ್ವರ: ಒಲಿಂಪಿಯನ್ ದೀಪಾ ಕರ್ಮಾಕರ್ ಅವರು ಎಂಟು ವರ್ಷಗಳ ದೀರ್ಘ ಕಾಲದ ನಂತರ ಸೀನಿಯರ್‌ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. 3 ದಿನಗಳ ಈ ಚಾಂಪಿಯನ್‌ಷಿಪ್‌ ಮಂಗಳವಾರದಿಂದ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ. ಮತ್ತೋರ್ವ ಒಲಿಂಪಿಯನ್‌ ಪ್ರಣತಿ ನಾಯಕ್, ರಾಷ್ಟ್ರೀಯ ಜಿಮ್ನಾಸ್ಟ್‌ಗಳಾದ ಯೋಗೆಶ್ವರ್ ಸಿಂಗ್‌, ರಾಕೇಶ್‌ ಪಾತ್ರ, ತಪನ್ ಮೊಹಾಂತಿ, ಸೈಫ್‌ ತಂಬೋಲಿ, ಗೌರವ್ ಕುಮಾರ್ ಮತ್ತಿತರರು ಈ ಕೂಟದಲ್ಲಿ ಭಾಗವಹಿಸುವರು. ‘ಜೂನಿಯರ್‌ ಅಥ್ಲೀಟುಗಳು, ಅನುಭವಿಗಳ ವಿರುದ್ಧ ಪೈಪೋಟಿ ನಡೆಸುವುದನ್ನು ನೋಡಲು ಇಲ್ಲಿಗೆ ಬಂದೆ’ ಎಂದು ದೀಪಾ ಅವರ ಕೋಚ್‌ ವಿಶ್ವೇಶ್ವರ ನಂದಿ ತಿಳಿಸಿದರು. ದೇಶದಾದ್ಯಂತ 300 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.