ಪ್ರಶಸ್ತಿ ಮರಳಿಸಿದ ವಿನೇಶಾ: ಮೋದಿ ವಿರುದ್ಧ ರಾಹುಲ್ ಕಿಡಿ ನವದೆಹಲಿ; ಕುಸ್ತಿಪಟು ವಿನೇಶಾ ಫೋಗಾಟ್ ಅವರು ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಕರ್ತವ್ಯ ಪಥದಲ್ಲಿ ಇಟ್ಟು ಮರಳಿರುವುದ‌ಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಲಿಂಪಿಕ್ ಪದಕವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಅವರೊಂದಿಗೆ ಫೋಗಾಟ್ ಅವರೂ ನಿಕಟಪೂರ್ವ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ವಿರೋಧಿಸಿದ್ದರು. ಕರ್ತವ್ಯ ಪಥದಲ್ಲಿನ ಫೋಗಾಟ್ ಅವರ ವಿಡಿಯೊ ಹಂಚಿಕೊಂಡ ರಾಹುಲ್ ಗಾಂಧಿ, ‘ದೇಶದ ಪ್ರತಿಯೊಬ್ಬ ಮಗಳಿಗೆ ಆತ್ಮಗೌರವವು ಮೊದಲನೆಯದು. ಇತರ ಯಾವುದೇ ಪದಕ ಅಥವಾ ಗೌರವವು ಅದರ ನಂತರ ಬರುತ್ತದೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ರಾಜಕೀಯ ಲಾಭಗಳು’ ಈ ಧೈರ್ಯಶಾಲಿ ಹೆಣ್ಣುಮಕ್ಕಳ ಕಣ್ಣೀರನ್ನು ಮೀರಿವೆಯೇ? ಪ್ರಧಾನಿ ರಾಷ್ಟ್ರದ ರಕ್ಷಕ. ಅವರ ಕಡೆಯಿಂದ ಇಂತಹ ಕ್ರೌರ್ಯ ನೋಡುವುದು ನೋವುಂಟು ಮಾಡುತ್ತದೆ’ ಎಂದು ರಾಹುಲ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.