ಆಸ್ಟ್ರೇಲಿಯನ್ ಓಪನ್‌ ಟೆನಿಸ್: ಬಹುಮಾನದ ಮೊತ್ತ ಶೇ 13 ಹೆಚ್ಚಳ ಮೆಲ್ಬರ್ನ್: ಜನವರಿ 14ರಿಂದ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ ಟೂರ್ನಿಗೆ ಬಹುಮಾನದ ಮೊತ್ತವನ್ನು ಶೇ 13ರಷ್ಟು ಹೆಚ್ಚಿಸಲಾಗಿದ್ದು, ಒಟ್ಟು ಬಹುಮಾನ ಮೊತ್ತ ಸುಮಾರು ₹56.6 ಕೋಟಿ ಇರಲಿದೆ ಎಂದು ಪಂದ್ಯಾವಳಿಯ ನಿರ್ದೇಶಕ ಕ್ರೇಗ್ ಟೈಲಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಆಟಗಾರ ಹಾಗೂ ಆಟಗಾರ್ತಿ ತಲಾ ₹17.82 ಕೋಟಿ ಬಹುಮಾನ ಮೊತ್ತ ಪಡೆಯಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.