ಪ್ರೊ ಕಬಡ್ಡಿ: ಬುಲ್ಸ್‌ ಪರಾಭವ ನೊಯ್ಡಾ: ಕೊನೆಗಳಿಗೆಯಲ್ಲಿ ಬೆಂಗಳೂರು ಬುಲ್ಸ್‌ ತಂಡ ಹೋರಾಟ ನೀಡಿದರೂ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಕ್ರವಾರ ಯು.ಪಿ.ಯೋಧಾಸ್ ತಂಡಕ್ಕೆ ಒಂದು ಪಾಯಿಂಟ್‌ ಅಂತರದಿಂದ (33–34) ಸೋಲನುಭವಿಸಿತು. ಬುಲ್ಸ್ ಪರ ಭರತ್ ಮತ್ತು ಸುಶೀಲ್ ತಲಾ ಎಂಟು ಪಾಯಿಂಟ್ಸ್ ಗಳಿಸಿದರು. ಯೋಧಾಸ್ ಕಡೆ ಪ್ರದೀಪ್ ನರ್ವಾಲ್ 10 ಪಾಯಿಂಟ್ಸ್ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ 46–33 ರಿಂದ ಹರಿಯಾಣ ಸ್ಟೀಲರ್ಸ್‌ ಮೇಲೆ ಜಯಗಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.