ಬ್ಯಾಸ್ಕೆಟ್‌ಬಾಲ್: ಸೆಮಿಗೆ ಪಿಸಿಸಿ, ಎಚ್‌ಬಿಆರ್‌ ಬೆಂಗಳೂರು: ಪಿಸಿಸಿ ಮತ್ತು ಎಚ್‌ಬಿಆರ್ ತಂಡಗಳು ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದವು. ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪಿಸಿಸಿ ತಂಡವು 83–45 ರಿಂದ ವಿಜಯನಗರ ಬಿಸಿ ಮೈಸೂರು ತಂಡವನ್ನು ಮಣಿಸಿತು. ಪಿಸಿಸಿ ತಂಡದ ವರುಣ್‌ ಮತ್ತು ಆಗ್ನೇಯ ಕ್ರಮವಾಗಿ 28 ಮತ್ತು 19 ಅಂಕಗಳೊಂದಿಗೆ ಮಿಂಚಿದರು. ಎಚ್‌ಬಿಆರ್‌ ಬಿ.ಸಿ ತಂಡವು 69–65 ರಿಂದ ಸದರ್ನ್ ಬ್ಲೂಸ್‌ ತಂಡವನ್ನು ಸೋಲಿಸಿತು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಬೀಗಲ್ಸ್‌ ಬಿ.ಸಿ 68–55 ರಿಂದ ಬೆಂಗಳೂರು ವ್ಯಾನ್‌ಗಾರ್ಡ್ಸ್ ತಂಡವನ್ನು, ದಾವಣಗೆರೆ ಬಿ.ಸಿ 66–62ರಿಂದ ಅಪ್ಪಯ್ಯ ಬಿ.ಸಿ ತಂಡವನ್ನು ಸೋಲಿಸಿದವು. ಸೆಮಿಗೆ ಡಿವೈಇಎಸ್‌, ಮೌಂಟ್ಸ್‌ ಕ್ಲಬ್‌: ಮಹಿಳೆಯರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಡಿವೈಇಎಸ್‌ ಮೈಸೂರು 65–29ರಿಂದ ಸದರ್ನ್‌ ಬ್ಲೂಸ್‌ ತಂಡವನ್ನು, ಮೌಂಟ್ಸ್‌ ಕ್ಲಬ್‌ 67–43ರಿಂದ ಯಂಗ್‌ ಓರಿಯನ್ಸ್‌ ಎಸ್‌.ಸಿ ತಂಡವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದವು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಂಗಳೂರು ವ್ಯಾನ್‌ಗಾರ್ಡ್ಸ್ 62–45ರಿಂದ ಡಿವೈಇಎಸ್‌ ವಿಜಯಪುರ ತಂಡವನ್ನು; ಜೆಎಸ್‌ಸಿ ತಂಡವು 52–15ರಿಂದ ವಿವೇಕ್ಸ್‌ ಎಸ್‌.ಸಿ ತಂಡವನ್ನು ಸೋಲಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.