ರಾಷ್ಟ್ರೀಯ ಟಿಟಿ: ಕರ್ನಾಟಕ ತಂಡದಲ್ಲಿ ನೀತಿ ಅಗರ್‌ವಾಲ್‌ ಬೆಂಗಳೂರು: ಕೋಲ್ಕತ್ತದಲ್ಲಿ ಇದೇ 6ರಿಂದ 14ರವರೆಗೆ ನಡೆಯಲಿರುವ 85ನೇ ಅಂತರ ರಾಜ್ಯ ಜೂನಿಯರ್‌ ಮತ್ತು ಯೂತ್‌ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ. ತಂಡ ಹೀಗಿದೆ– 17 ವರ್ಷದೊಳಗಿನ ಬಾಲಕಿಯರು: ನೀತಿ ಅಗರ್‌ವಾಲ್‌, ಪ್ರೇಕ್ಷಾ ತಿಲಾವತ್, ಪ್ರಣವಿ ಎಚ್‌.ಎ, ಹಿಮಾಂಶಿ ಚೌಧರಿ. 17 ವರ್ಷದೊಳಗಿನ ಬಾಲಕರು: ಅಭಿನವ್ ಕೆ.ಮೂರ್ತಿ, ವರುಣ್ ಬಿ.ಕಶ್ಯಪ್, ತೆಶುಬ್ ದಿನೇಶ್, ವಿಭಾಸ್ ವಿ.ಜಿ. 19 ವರ್ಷದೊಳಗಿನ ಬಾಲಕಿಯರು: ತೃಪ್ತಿ ಪುರೋಹಿತ್, ಸಹನಾ ಎಚ್.ಮೂರ್ತಿ, ದೇಶ್ನಾ ಎಂ.ವಂಶಿಕಾ, ಹಿಮಾಂಶಿ ಚೌಧರಿ 19 ವರ್ಷದೊಳಗಿನ ಬಾಲಕರು: ರೋಹಿತ್‌ ಶಂಕರ್‌, ಆಕಾಶ್‌ ಕೆ.ಜೆ, ವರುಣ್‌ ಬಿ. ಕಶ್ಯಪ್‌, ಅಭಿನವ್ ಕೆ. ಮೂರ್ತಿ ಮ್ಯಾನೇಜರ್/ಕೋಚ್: ಅನಿರ್ಬನ್ ತರಫ್ದಾರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.