2036ರ ಒಲಿಂಪಿಕ್ಸ್‌: ಆರು ಕ್ರೀಡಾ ಸಂಕೀರ್ಣಕ್ಕೆ ಭಾರತ ₹ 6 ಸಾವಿರ ಕೋಟಿ ಮೀಸಲು ಗಾಂಧಿನಗರ: 2036ರ ಬೇಸಿಗೆ ಒಲಿಂಪಿಕ್ಸ್‌ ಆತಿಥ್ಯಕ್ಕೆ ಭಾರತವು ಬಿಡ್‌ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಆರು ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸಲು ₹ 6,000 ಕೋಟಿ ಅನುದಾನವನ್ನು ಗುಜರಾತ್‌ ಸರ್ಕಾರ ಮೀಸಲಿಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ‘ಒಲಿಂಪಿಕ್ಸ್ ಆಯೋಜನೆಯ ನಿಟ್ಟಿನಲ್ಲಿ ಸರ್ಕಾರವು ‘ಗುಜರಾತ್ ಒಲಿಂಪಿಕ್ ಪ್ಲಾನಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಕಾರ್ಪೊರೇಷನ್ ಲಿಮಿಟೆಡ್’ ಎಂದು ಪ್ರತ್ಯೇಕ ಕಂಪೆನಿಯನ್ನು ಮೂರು ತಿಂಗಳ ಹಿಂದೆಯೇ ರಚಿಸಿದೆ. ಮುಕ್ತ ಬಿಡ್ ಮೂಲಕ 350 ಎಕರೆ ಪ್ರದೇಶದಲ್ಲಿ ಆರು ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.