ರೋಡ್‌ ಸೈಕ್ಲಿಂಗ್: 9ನೇ ಬಾರಿ ಚಿನ್ನ ಗೆದ್ದ ನವೀನ್‌ ಜಾನ್ ವಿಜಯಪುರ: ‘ಟೈಮ್‌ ಟ್ರೈಲ್‌ ಕಿಂಗ್‌’ ಎಂದೇ ಪ್ರಸಿದ್ಧರಾದ ಬೆಂಗಳೂರಿನ ಸೈಕ್ಲಿಸ್ಟ್‌ ನವೀನ್‌ ಜಾನ್‌ ಇಲ್ಲಿ ಮಂಗಳವಾರದಿಂದ ಆರಂಭವಾದ 28ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ನಿರಂತರವಾಗಿ ಈವರೆಗೆ 8 ಚಿನ್ನದ ಪದಕ ಗಳಿಸಿದ್ದ ನವೀನ್‌ ಜಾನ್‌ ಪುರುಷರ 40 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್‌ನಲ್ಲಿ 49 ನಿಮಿಷ 51:977 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಸಾಧನೆ ಮೆರೆದಿದ್ದಾರೆ. ಮೊದಲ ದಿನ ನಡೆದ ವಿವಿಧ ವಿಭಾಗಗಳಲ್ಲಿ ರಾಜಸ್ಥಾನದ ಸೈಕ್ಲಿಸ್ಟ್‌ಗಳು ಪಾರಮ್ಯ ಮೆರೆದಿದ್ದಾರೆ. ವಿವಿಧ ವಿಭಾಗದ ಫಲಿತಾಂಶ ಇಂತಿದೆ. 18 ವರ್ಷದೊಳಗಿನ ಬಾಲಕಿಯರ 20 ಕಿ.ಮೀ ವೈಯಕ್ತಿಕ ಟೈಮ್‌ ಟ್ರಯಲ್: 1. ಹರ್ಷಿತಾ ಜಕಾರ, ರಾಜಸ್ಥಾನ, 29:27.210 ನಿಮಿಷ 2. ನಂದಾ ಚಿಚಖಂಡಿ, ಕರ್ನಾಟಕ, 30:18.029 ನಿಮಿಷ 3. ಅನುಪಮಾ ಗುಳೇದ, ಕರ್ನಾಟಕ, 30:49.649 ನಿಮಿಷ 16 ವರ್ಷದೊಳಗಿನ ಬಾಲಕರ 20 ಕಿ.ಮೀ ವೈಯಕ್ತಿಕ ಟೈಮ್‌ ಟ್ರಯಲ್: 1. ಶೌರ್ಯ ಶೇರೋನ್, ರಾಜಸ್ಥಾನ, 26:24.126 ನಿಮಿಷ 2. ರಾಧಾಕಿಶನ್ ಹೂಡ, ರಾಜಸ್ಥಾನ, 26:51.184 ನಿಮಿಷ 3. ಯಲ್ಲೇಶ ಹುಡೇದ, ಕರ್ನಾಟಕ, 27:06.420 ನಿಮಿಷ 23 ವರ್ಷದೊಳಗಿನ ಪುರುಷರ 40 ಕಿ.ಮೀ ವೈಯಕ್ತಿಕ ಟೈಮ್‌ ಟ್ರಯಲ್: 1. ಮಾನವ ಸರ್ದಾ, ರಾಜಸ್ಥಾನ, 52:47.356 ನಿಮಿಷ 2. ದುಶ್ಯಂತ ಬೇನಿವಾಲ, ಚಂಡೀಗಡ, 53.09.840 ನಿಮಿಷ 3. ಸಾಹಿಲ್, ಹರಿಯಾಣ, 53:59.070 ನಿಮಿಷ ಪುರುಷರ 40 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್: 1. ನವೀನ್ ಜಾನ್, ಕರ್ನಾಟಕ 49:51.977 ನಿಮಿಷ 2. ದಿನೇಶಕುಮಾರ್‌, ಸರ್ವಿಸಸ್, 51:08.756 ನಿಮಿಷ 3. ಜೋಯಲ್ ಸಂತೋಷ ಸುಂದರಂ ಎಸ್., ತಮಿಳುನಾಡು,51: 28.293 ನಿಮಿಷ ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿ ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರವೇ ನಿರ್ಧರಿಸಲಾಗುವುದು. -ಎಂ. ಬಿ. ಪಾಟೀಲ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.