ಏಷ್ಯನ್ ಕ್ವಾಲಿಫೈಯರ್‌ ಶೂಟಿಂಗ್‌: ನ್ಯಾನ್ಸಿಗೆ ಚಿನ್ನ ಜಕಾರ್ತ: ಭಾರತದ ಯುವ ಶೂಟರ್‌ಗಳಾದ ನ್ಯಾನ್ಸಿ ಮತ್ತು ಒಲಿಂಪಿಯನ್ ಎಲವೆನಿಲ್ ವಲರಿವನ್ ಅವರು ಬುಧವಾರ ಇಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ನ್ಯಾನ್ಸಿ ಫೈನಲ್‌ ಸ್ಪರ್ಧೆಯಲ್ಲಿ 252.8 ಅಂಕಗಳನ್ನು ಗಳಿಸಿ ಅಗ್ರಸ್ಥಾನವನ್ನು ಪಡೆದರು. ಎಲವೆನಿಲ್ (252.7) ಅವರು ಕೂದಲೆಳೆಯ ಅಂತರದಲ್ಲಿ ಚಿನ್ನವನ್ನು ಕಳೆದುಕೊಂಡರು. ಚೀನಾದ ಶೆನ್ ಯುಫಾನ್ ಕಂಚು ಗೆದ್ದರು. ಇದಕ್ಕೂ ಮೊದಲು ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ರುದ್ರಂಕ್ಷ್ ಪಾಟೀಲ್ ಕಂಚಿನ ಪದಕ ಗೆದ್ದಿರು. ಈ ವಿಭಾಗದಲ್ಲಿ ಭಾರತದ ಅರ್ಜುನ್ ಬಾಬುತಾ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದರು. ಇವರಿಬ್ಬರು ಕಾರ್ತಿಕ್ ಶಬರಿ ರಾಜ್ ರವಿಶಂಕರ್ ಅವರೊಂದಿಗೆ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.