ಬ್ಯಾಡ್ಮಿಂಟನ್‌ ಟೂರ್ನಿ | ಸಾತ್ವಿಕ್‌– ಚಿರಾಗ್‌ ಎರಡನೇ ಸುತ್ತಿಗೆ ನವದೆಹಲಿ: ಭಾರತದ ತಾರೆಗಳಾದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಬುಧವಾರ ಇಂಡಿಯಾ ಓಪನ್‌ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದರು. ಆದರೆ, ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಮೊದಲ ಸುತ್ತಿನಲ್ಲಿ ಮುಗ್ಗರಿಸಿದರು. ವಿಶ್ವದ ಎರಡನೇ ಕ್ರಮಾಂಕದ ಭಾರತದ ಜೋಡಿ 21-15, 19-21, 21-16ರಿಂದ ಚೀನಾ ತೈಪೆಯ ಫಾಂಗ್-ಚಿಹ್ ಲೀ ಮತ್ತು ಫಾಂಗ್-ಜೆನ್ ಲೀ ಅವರನ್ನು ಹಿಮ್ಮೆಟ್ಟಿಸಿತು. ಶ್ರೀಕಾಂತ್‌ಗೆ ನಿರಾಸೆ: ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್‌ 22-24, 13-21ರಿಂದ ವಿಶ್ವದ 18ನೇ ಕ್ರಮಾಂಕದ ಲೀ ಚೆಯುಕ್ ಯಿಯು (ಹಾಂಗ್‌ಕಾಂಗ್‌) ವಿರುದ್ಧ ಪರಾಭವಗೊಂಡರು. ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಅವರಿಗೆ ಈ ಸೋಲಿನಿಂದಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಯ ಹಾದಿ ಮತ್ತಷ್ಟು ಜಟಿಲವಾಗಿದೆ. ಮಹಿಳೆಯರ ಡಬಲ್ಸ್‌ನಲ್ಲಿ ವಿಶ್ವದ 20ನೇ ಕ್ರಮಾಂಕದ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಜೋಡಿ ಮೊದಲ ಸುತ್ತಿನಲ್ಲಿ 5-21, 21-18, 11-21ರಿಂದ ಥಾಯ್ಲೆಂಡ್‌ನ ಜೊಂಗ್‌ಕೋಲ್ಫಾನ್ ಕಿಟಿತಾರಾಕುಲ್ ಮತ್ತು ರವಿಂಡ ಪ್ರಜೊಂಗ್‌ಜೈ ಅವರಿಗೆ ಮಣಿಯಿತು. - , 17 () ' 750 - ' . . 2 , - 1000 , 21-15 19-21 21-16 - - . , 47- 22-24 13-21 . 18 . , . , , 17-17 . 20-20 - , , , . , 2-11 . 6-12, . " ," . " ' , ' . . , . () , . , . " ' , ." , . 20 , 100 , . 10 5-21 21-18 11-21 ' . , ' , ' . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.