ರಾಷ್ಟ್ರೀಯ ಟೇಬಲ್‌ ಟೆನಿಸ್‌: ತೆಶುಬ್ ದಿನೇಶ್‌ಗೆ ಬೆಳ್ಳಿ: ಬೆಂಗಳೂರು: ಕರ್ನಾಟಕದ ತೆಶುಬ್‌ ದಿನೇಶ್‌ ಅವರು ಇಂದೋರ್‌ನಲ್ಲಿ ನಡೆಯುತ್ತಿರುವ 85ನೇ ಅಂತರರಾಜ್ಯ ಯುಟಿಟಿ ಕೆಡೆಟ್‌ ಮತ್ತು ಸಬ್‌ ಜೂನಿಯರ್‌ ರಾಷ್ಟ್ರೀಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಬಾಲಕರ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ ತೆಶುಬ್‌ 5-11, 11-5, 5-11, 8-11ರಿಂದ ಪಶ್ಚಿಮ ಬಂಗಾಲದ ಸೋಹಮ್ ಮುಖರ್ಜಿ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದರು. ಅವರು ಸೆಮಿಫೈನಲ್‌ನಲ್ಲಿ 14-12, 16-18, 13-11, 7-11, 11-9ರಿಂದ ಪಶ್ಚಿಮ ಬಂಗಾಲದ ದೇಬ್ರಾಜ್ ಭಟ್ಟಾಚಾರ್ಯ ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.