‌ಬೆಂಗಳೂರು: ಜ.28ರಂದು ಅಥ್ಲೆಟಿಕ್ಸ್ ಕೂಟ ‌ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಜ.28ರಂದು ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್‌ ಕೂಟವನ್ನು ಆಯೋಜಿಸಲಾಗಿದೆ. ಈ ಕೂಟದಲ್ಲಿ 10, 12, 14, 16 ವಯೋಮಿತಿ ಒಳಗಿನವರು ಭಾಗವಹಿಸಬೇಕು. ಈ ಕೂಟವು ಫೆಬ್ರವರಿ 16 ರಿಂದ 18ರವರೆಗೆ ಗುಜರಾತ್‌ನಲ್ಲಿ ನಡೆಯಲಿರುವ 19 ನೇ ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ಸ್ ಕೂಟಕ್ಕೆ 14 ಮತ್ತು 16 ವಯೋಮಿತಿ ತಂಡಗಳ ಆಯ್ಕೆ ಟ್ರಯಲ್ಸ್‌ ಇಲ್ಲಿ ನಡೆಯಲಿದೆ. ಮಾಹಿತಿಗೆ ಮೊ. 9448438276. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.