ಮುಂಬೈ ಮ್ಯಾರಥಾನ್: ಇಬ್ಬರ ಸಾವು, 22 ಮಂದಿ ಆಸ್ಪತ್ರೆಗೆ ಮುಂಬೈ: ಇಲ್ಲಿ ನಡೆದ‌ ವಾರ್ಷಿಕ ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ 74 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರು ಸ್ಪರ್ಧಿಗಳು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ಭಾನುವಾರ ನಡೆದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ 22 ಜನರನ್ನು ನಿರ್ಜಲೀಕರಣ ಮತ್ತು ಇತರ ಕಾರಣಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಕೋಲ್ಕತ್ತಾದ ಸುವ್ರದೀಪ್ ಬ್ಯಾನರ್ಜಿ (40) ಮತ್ತು ಮುಂಬೈನ ರಾಜೇಂದ್ರ ಬೋರಾ (74) ಎಂದು ಗುರುತಿಸಲಾಗಿದೆ. ಅನುಭವಿ ಮ್ಯಾರಥಾನ್ ಓಟಗಾರ, ಸಾಫ್ಟ್‌ವೇರ್‌ ಎಂಜಿನಿಯರ್ ಬ್ಯಾನರ್ಜಿ ಹಾಜಿ ಅಲಿ ಜಂಕ್ಷನ್ ಬಳಿ ಕುಸಿದುಬಿದ್ದರು. ಮರೀನ್ ಡ್ರೈವ್ ಎದುರಿನ ಜನಪ್ರಿಯ ಪಿಜ್ಜಾ ಜಾಯಿಂಟ್ ಬಳಿಯ ಪೆಟ್ರೋಲ್ ಪಂಪ್ ಬಳಿ ರಸ್ತೆಯಲ್ಲಿ ಬೋರಾ ಕುಸಿದುಬಿದ್ದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹೇಲ್ ಲೆಮಿ ಬೆರ್ಹಾನು ಮತ್ತು ಅಬೆರಾಶ್ ಮಿನ್ಸೆವೊ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇಥಿಯೋಪಿಯಾದ ಓಟಗಾರರು ಮುಂಬೈ ಮ್ಯಾರಥಾನ್ ನಲ್ಲಿ ಪ್ರಾಬಲ್ಯ ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.