ಚೆಸ್‌: ಜಂಟಿ ಅಗ್ರಸ್ಥಾನದಲ್ಲಿ ಗುಕೇಶ್‌ ಮುಂದುವರಿಕೆ ವಿಜ್ಕ್ ಆನ್‌ ಝೀ (ನೆದರ್ಲೆಂಡ್ಸ್‌): ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಡಿ.ಗುಕೇಶ್‌ ಅವರು ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಸೋಮವಾರ ಮಹಿಳಾ ವಿಶ್ವ ಚಾಂಪಿಯನ್‌ ಚೀನಾದ ಜು ವೆಂಜುನ್ ವಿರುದ್ಧ ಡ್ರಾ ಸಾಧಿಸಿ, ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಎಂಟು ಸುತ್ತಿನ ಬಳಿಕ 5 ಅಂಕ ಸಂಪಾದಿಸಿರುವ ಗುಕೇಶ್, ಅವರು ಆತಿಥೇಯ ದೇಶದ ಅನೀಶ್ ಗಿರಿ ಅವರೊಂದಿಗೆ ಮುನ್ನಡೆಯನ್ನು ಹಂಚಿಕೊಂಡಿದ್ದಾರೆ. ಅನೀಶ್‌ ಅವರು ಎಂಟನೇ ಸುತ್ತಿನಲ್ಲಿ ಚೀನಾದ ವೀ ಯಿ ಅವರೊಂದಿಗೆ ಡ್ರಾ ಮಾಡಿಕೊಂಡರು. ಭಾರತದ ವಿದಿತ್ ಗುಜರಾತಿ ಮತ್ತು ಆರ್. ಪ್ರಜ್ಞಾನಂದ ಅವರು 4.5 ಅಂಕಗಳೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.