ಪ್ರೊ ಕಬಡ್ಡಿ: ಪಟ್ನಾ–ಪುಣೆ ಪಂದ್ಯ ಟೈ ಪಟ್ನಾ: ಪಟ್ನಾ ಪೈರೇಟ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳ ನಡುವೆ ಶನಿವಾರ ರಾತ್ರಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ನಡೆದ ಪಂದ್ಯವು ಟೈ ಆಯಿತು. ಪುಣೇರಿ ತಂಡದ ನಾಯಕ ಅಸ್ಲಂ ಇನಾಮದಾರ್ (13 ಅಂಕ) ಮತ್ತು ಪಟ್ನಾ ತಂಡದ ನಾಯಕ ಸಚಿನ್ (ಒಂಬತ್ತು ಅಂಕ) ಅವರ ಹೋರಾಟದಿಂದಾಗಿ ಪಂದ್ಯವು 32–32ರಿಂದ ಟೈ ಆಯಿತು. ಆತಿಥೇಯ ಪಟ್ನಾ ತಂಡದ ಮಯೂರ್ ಕದಂ ಟ್ಯಾಕ್ಲಿಂಗ್‌ನಲ್ಲಿ ಐದು ಅಂಕ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡವು 36–27ರಿಂದ ಯುಪಿ ಯೋಧಾಸ್ ವಿರುದ್ಧ ಜಯಗಳಿಸಿತು. ದಬಂಗ್ ತಂಡದ ನಾಯಕ ಆಶು ಮಲೀಕ್ 11 ಅಂಕಗಳನ್ನು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.