ಈಜು: ತಾನ್ಯಾಗೆ ಚಿನ್ನ ‘ಟ್ರಿಪಲ್‌’ ಮೈಸೂರು: ಇಲ್ಲಿನ ಈಜುಪಟು ಎಸ್.ತಾನ್ಯಾ ದೆಹಲಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ಬಿಐಎಂಎಸ್‌ಟಿಇಸಿ ಅಂತರರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಚಿನ್ನ ಗೆದ್ದರು. ಇದೇ ಕೂಟದಲ್ಲಿ ಅವರು ಎರಡು ಸುವರ್ಣ ಪದಕಗಳಿಗೆ ಕೊರಳೊಡ್ಡಿದ್ದರು. 14 ವರ್ಷದ ಅವರು 400 ಮೀಟರ್ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ 5 ನಿಮಿಷ 12.96 ಸೆಕೆಂಡುಗಳಲ್ಲಿ ಗುರಿ ತಲುಪಿ ಪದಕ ಗಳಿಸಿದರು. ಬುಧವಾರ 200 ಮೀಟರ್ಸ್‌ ಬ್ರೆಸ್ಟ್‌ ಸ್ಟ್ರೋಕ್ ಹಾಗೂ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ 3 ಚಿನ್ನ ಗೆದ್ದ ಮೈಸೂರಿನ ಮೊದಲ ಕ್ರೀಡಾಪಟು ಎಂಬ ದಾಖಲೆ ಅವರದ್ದು. ಅವರಿಗೆ ಪಿ.ಪವನ್‌ ಕುಮಾರ್ ತರಬೇತಿ ನೀಡುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.