ಪ್ರೊ ಕಬಡ್ಡಿ ಲೀಗ್‌ : ವಾರಿಯರ್ಸ್ ಮಣಿಸಿದ ಜೈಂಟ್ಸ್‌ ಕೊಲ್ಕತ್ತ: ಪಾರ್ಟಿಕ್ ದಹಿಯಾ (13) ಮತ್ತು ರಾಕೇಶ್ ಸುಂಗ್ರೋಯಾ (11) ಅವರ ಆಮೋಘ ರೈಡಿಂಗ್‌ ಬಲದಿಂದ ಗುಜರಾತ್‌ ಜೈಂಟ್ಸ್‌ ತಂಡವು ಶುಕ್ರವಾರ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು 41–32 ಪಾಯಿಂಟ್ಸ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಜೈಂಟ್ಸ್ ತಂಡ ಪ್ಲೇ ಆಫ್‌ ಸನಿಹ ಬಂದಿದೆ. ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಥರ್ಮಾಧದಲ್ಲಿ ಜೈಂಟ್ಸ್‌ ತಂಡವು 18–14ರಿಂದ ಮುನ್ನಡೆಯಲ್ಲಿತ್ತು. ವಿರಾಮದ ಬಳಿಕ ವೇಗದ ಆಟಕ್ಕೆ ಒತ್ತು ನೀಡಿ, ಮತ್ತಷ್ಟು ಪಾಯಿಂಟ್ಸ್‌ ಕಲೆ ಹಾಕಿದರು. ವಾರಿಯರ್ಸ್ ಪರ ನಿತಿನ್ ಕುಮಾರ್ (12) ಮತ್ತು ಮಣಿದರ್ ಸಿಂಗ್ (9) ಅಂಕ ಗಳಿಸಿ ಮಿಂಚಿದರು. ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು ...ರಿಂದ ಯು.ಪಿ.ಯೋಧಾಸ್ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.