ಪ್ರೊ ಲೀಗ್ ಹಾಕಿ: ಭಾರತಕ್ಕೆ ಕೊನೆಗೂ ಜಯ ಭುವನೇಶ್ವರ (ಪಿಟಿಐ): ಭಾರತ ವನಿತೆಯರು ಐಎಚ್‌ಎಫ್‌ ಪ್ರೊ ಲೀಗ್ ಪಂದ್ಯದಲ್ಲಿ ಶುಕ್ರವಾರ 3–1 ಗೋಲುಗಳಿಂದ ಅಮೆರಿಕ ತಂಡವನ್ನು ಸೋಲಿಸಿ ಏಕೈಕ ಗೆಲುವಿನೊಡನೆ ಮೊದಲ ಲೆಗ್‌ ಪೂರ್ಣಗೊಳಿಸಿದರು. ವಂದನಾ ಕಠಾರಿಯಾ (9ನೇ ನಿಮಿಷ), ದೀಪಿಕಾ (26ನೇ) ಮತ್ತು ಸಮಿಲಾ ಟೇಟೆ (56ನೇ) ಭಾರತದ ಪರ ಗೋಲುಗಳನ್ನು ಗಳಿಸಿದರು. ಅಮೆರಿಕ ಪರ ಸಾನೆ ಕಾರ್ಲ್ಸ್ ಏಕೈಕ ಗೋಲು (42ನೇ) ಗಳಿಸಿದರು. ವಿರಾಮದ ವೇಳೆ ಭಾರತ 2–0 ಗೋಲುಗಳಿಂದ ಮುಂದಿತ್ತು. ಚೀನಾ, ನೆದರ್ಲೆಂಡ್ಸ್‌ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಮೂರು ಪಂದ್ಯಗಳಲ್ಲಿ ಸೋತಿತ್ತು. ಅಮೆರಿಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತಂತಾಗಿದೆ. ಭಾರತ ತಂಡ ಫೆ. 12ರಂದು ರೂರ್ಕೆಲಾಕ್ಕೆ ತೆರಳಲಿದ್ದು, ಚೀನಾ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.