ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ ನವದೆಹಲಿ: ಸುಶೀಲ್‌ ಮತ್ತು ಅಕ್ಷಿತ್‌ ಧುಳ್‌ ಅವರ ಅಮೋಘ ರೇಡಿಂಗ್‌ ಬಲದಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಭಾನುವಾರ 42–37ರಿಂದ ಯು ಮುಂಬಾ ವಿರುದ್ಧ ಗೆಲುವು ಸಾಧಿಸಿತು. ಇಲ್ಲಿನ ತ್ಯಾಗರಾಜ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ 22–24ರಿಂದ ಹಿನ್ನಡೆಯಲ್ಲಿದ್ದ ಬುಲ್ಸ್‌ ತಂಡವು ನಂತರ ಸಾಂಘಿಕ ಆಟ ಪ್ರದರ್ಶಿಸಿ ಐದು ಅಂಗಗಳ ಗೆಲುವು ಸಾಧಿಸಿತು. ಸುಶೀಲ್‌ ಮತ್ತು ಅಕ್ಷಿತ್‌ ಕ್ರಮವಾಗಿ 10 ಮತ್ತು 8 ಪಾಯಿಂಟ್ಸ್‌ ತಂದುಕೊಟ್ಟರೆ, ಟ್ಯಾಕಲ್‌ನಲ್ಲಿ ಸುರ್ಜೀತ್ ಸಿಂಗ್ ಮತ್ತು ರಾನ್‌ ಸಿಂಗ್ ಕ್ರಮವಾಗಿ 6 ಮತ್ತು 5 ಅಂಕಗಳೊಂದಿಗೆ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು. ಯು ಮುಂಬಾ ತಂಡದ ಜೈ ಭಗವಾನ್‌ ‘ಸೂಪರ್‌ ಟೆನ್‌’ ಸಾಧನೆ ಮಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.