ಖೇಲೊ ಇಂಡಿಯಾ ಚಳಿಗಾಲದ ಕ್ರೀಡೆ: ವರ್ಷಾ ಪುರಾಣಿಕ್‌ಗೆ ಡಬಲ್‌ ಚಿನ್ನ ಲೇಹ್‌ : ಭಾರತದ ಪ್ರಮುಖ ಐಸ್‌ ಸ್ಕೇಟರ್‌ ವರ್ಷಾ ಪುರಾಣಿಕ್ ಖೇಲೊ ಇಂಡಿಯಾ ಚಳಿಗಾಲದ ಕ್ರೀಡೆಗಳಲ್ಲಿ ಕರ್ನಾಟಕಕ್ಕೆ ‘ಡಬಲ್‌’ ಚಿನ್ನ ಪದಕ ತಂದುಕೊಟ್ಟರು. ಮಹಿಳೆಯರ 500 ಮೀಟರ್ ಶಾರ್ಟ್ ಟ್ರ್ಯಾಕ್ ರೇಸ್‌ (17 ವರ್ಷದ ಮೇಲ್ಪ‍ಟ್ಟವರ ವಿಭಾಗ)ನಲ್ಲಿ ಅವರು 1 ನಿಮಿಷ 7.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅವರು ಶನಿವಾರ 300 ಮೀ. ಶಾರ್ಟ್‌ ಟ್ರ್ಯಾಕ್‌ ರೇಸ್‌ನಲ್ಲಿ ಚಿನ್ನ ಗೆದ್ದಿದ್ದರು. ಇಲ್ಲಿಯವರೆಗೆ ಇತ್ಯರ್ಥವಾದ 8 ಚಿನ್ನದ ಪದಕಗಳಲ್ಲಿ ಕರ್ನಾಟಕ ತಂಡ ನಾಲ್ಕನ್ನು ಗೆದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.