ವಾಲಿಬಾಲ್ ಲೀಗ್: ದೆಹಲಿ ತೂಫಾನ್ಸ್ ವಿರುದ್ಧ ಬೆಂಗಳೂರು ಟ್ರಾಪಿಡೋಸ್ ಪಂದ್ಯ ನಾಳೆ ಚೆನ್ನೈ: ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟ್ರಾಪಿಡೋಸ್ ತಂಡವು ದೆಹಲಿ ತೂಫಾನ್ಸ್ ವಿರುದ್ಧ ಭಾನುವಾರ ಸೆಣಸಲಿದೆ. ಲೀಗ್‌ನ ಮೊದಲ ಪಂದ್ಯದಲ್ಲಿ ಕೋಲ್ಕತ್ತ ಥಂಡರ್ ಬೋಲ್ಟ್ಸ್‌ ವಿರುದ್ಧ 3–1 ಅಂತರದಿಂದ ಗೆದ್ದು ಬೀಗಿರುವ ಬೆಂಗಳೂರು ತಂಡ, ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ. ಪಂದ್ಯವು ರಾತ್ರಿ 8.30ರಿಂದ ಆರಂಭವಾಗಲಿದೆ. ಬೆಂಗಳೂರು ತಂಡದ ನಾಯಕ ಪಂಕಜ್ ಶರ್ಮಾ ಅವರ ತಂಡ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.