ಥ್ರೋಬಾಲ್ ತಂಡಕ್ಕೆ ಸಂಪೂರ್ಣಾ ನಾಯಕಿ ಬೆಂಗಳೂರು: ಸಂಪೂರ್ಣಾ ಹೆಗಡೆ ಅವರು ಬಹರೇನ್‌ನಲ್ಲಿ ಇದೇ 23ರಿಂದ ನಡೆಯಲಿರುವ ಮಹಿಳೆಯರ ಇಂಡೋ–ಗಲ್ಫ್‌ ಅಂತರರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಷಿಪ್‌ ಆಡುವ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೂರು ದಿನಗಳ ಕಾಲ ಈ ಟೂರ್ನಿ ನಡೆಯಲಿದೆ. ಭಾರತ ಥ್ರೋಬಾಲ್ ಫೆಡರೇಷನ್ ಅಧ್ಯಕ್ಷ ಡಾ. ಎಸ್‌. ಮಣಿ ಪ್ರಕಟಿಸಿರುವ ತಂಡ ಇಂತಿದೆ; ಸಂಪೂರ್ಣಾ ಹೆಗಡೆ (ನಾಯಕಿ), ಕೀರ್ತನಾ ಪರಮೇಶ್ವರನ್, ತನಿಶಾ ಜೈನ್, ಆಯ್ಲಾ ರಚಿತಾ ವಿಜಯ್, ಕಲ್ಪನಾ ಚಲ್ಲಾ, ಪಾವನಿ ಚೋಡಿಸೆಟ್ಟಿ, ಅನಿತಾ ವೀಣಾ, ದೀಪಾ ಹೆಬ್ಬಾರ್, ಪೃಶಾ ಉತ್ಪಲಾಕ್ಷಿ ಶ್ರೀನಿವಾಸನ್, ಎನ್.ಎಸ್.ಸುಬ್ರಮಣ್ಯ (ತರಬೇತುದಾರ), ಡಿ.ಸಂತೋಷ್ (ರೆಫರಿ), ವಿವೇಕ್ ಹೆಗಡೆ (ಮಾಧ್ಯಮ ಸಂಯೋಜನೆ). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.