: ಡಬಲ್ ‘ಖುಷಿ’ ಹೊತ್ತು ಭಾರತಕ್ಕೆ ಬಂದ ಮನು ಬಾಕರ್‌ಗೆ ಅದ್ಧೂರಿ ಸ್ವಾಗತ ಏರ್ ಇಂಡಿಯಾದ ನೇರ ವಿಮಾನದಲ್ಲಿ (ಎಐ 142) ಪ್ಯಾರಿಸ್‌ನಿಂದ ಹೊರಟ ಮನು ಭಾಕರ್, ಬುಧವಾರ ಬೆಳಿಗ್ಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದ ವಿಮಾನವು ಬೆಳಿಗ್ಗೆ 9.20ಕ್ಕೆ ಲ್ಯಾಂಡ್ ಆಯಿತು. ಪಿಟಿಐ ಸೋನೆ ಮಳೆಯ ನಡುವೆಯೆ ಸುಮಾರು 100 ಮಂದಿ ಅವರ ಸ್ವಾಗತಕ್ಕೆ ಏರ್‌ಪೋರ್ಟ್‌ನಲ್ಲಿ ಕಾದು ಕುಳಿತಿದ್ದರು. ಮನು ಅವರ ಪೋಷಕರಾದ ರಾಮ್ ಕಿಶನ್‌ ಹಾಗೂ ಸುಮೇಧಾ, ಭಾಕರ್ ಅವರ ತವರು ರಾಜ್ಯವಾದ ಉತ್ತರಾಖಂಡದ ಅಧಿಕಾರಿಗಳು, ಕ್ರೀಡಾ ಪ್ರೇಮಿಗಳು, ವೈಯಕ್ತಿಕ ಕೋಚ್ ಜಸ್ಪಾಲ್ ರಾಣಾ ಅವರು ಏರ್‌ಪೋರ್ಟ್‌ನಲ್ಲಿ ಭಾಕರ್‌ಗಾಗಿ ಕಾಯುತ್ತಿದ್ದರು. ಪಿಟಿಐ ಹಾಡು, ನೃತ್ಯ, ತಮಟೆ ಬಾರಿಸುವ ಮೂಲಕ ಭಾಕರ್ ಆಗಮನವನ್ನು ಏರ್‌ಪೋರ್ಟ್‌ನಲ್ಲಿ ಜನ ಸಂಭ್ರಮಿಸಿದರು. ಭಾಕರ್‌ ಹಾಗೂ ರಾಣಾ ಅವರ ಚಿತ್ರಗಳಿದ್ದ ಪೋಸ್ಟರ್, ಬ್ಯಾನರ್‌ ಹಿಡಿದು ಸ್ವಾಗತ ಕೋರಿದರು. ಪಿಟಿಐ ಶನಿವಾರ ಮತ್ತೆ ಪ್ಯಾರಿಸ್‌ಗೆ ತೆರಳಲಿರುವ ಭಾಕರ್‌, ಭಾನುವಾರ ನಡೆಯಲಿರುವ ಒಲಿಂಪಿಕ್ಸ್ ಸಮಾರೋಪ ಸಮಾರಂಭಲ್ಲಿ ಭಾರತದ ಮಹಿಳಾ ಧ್ವಜಧಾರಿಯಾಗಿ ಪಾಲ್ಗೊಳ್ಳಲಿದ್ದಾರೆ. ಪಿಟಿಐ 22 ವರ್ಷದ ಭಾಕರ್, ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್ ಹಾಗೂ ಏರ್‌ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದದ್ದಾರೆ. ಪಿಟಿಐ 22 ವರ್ಷದ ಭಾಕರ್, ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್ ಹಾಗೂ ಏರ್‌ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದದ್ದಾರೆ. ಪಿಟಿಐ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.