ಪ್ರೀ ಕ್ವಾರ್ಟರ್‌ಗೆ ಸಾನಿಯಾ ದುಬೈ: ಭಾರತದ ಸಾನಿಯಾ ಮಿರ್ಜಾ ಮತ್ತು ಫ್ರಾನ್ಸ್‌ನ ಕ್ಯಾರೊಲಿನಾ ಗಾರ್ಸಿಯಾ ಅವರು ದುಬೈ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸಾನಿಯಾ ಮತ್ತು ಕ್ಯಾರೊಲಿನಾ 6–4, 4–6, 10–8ರಲ್ಲಿ ರಷ್ಯಾದ ಅಲಾ ಕುದ್ರ್ಯವತ್ಸೆವಾ ಮತ್ತು ಸ್ಲೊವೇನಿಯಾದ ಕ್ಯಾಥರಿನಾ ಶ್ರೆಬೋತ್ನಿಕಾ ಅವರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಭಾರತ–ಫ್ರಾನ್ಸ್‌ ಜೋಡಿಯು ಚೀನಾದ ಸಯ್‌ ಸಯ್‌ ಜೆಂಗ್‌ ಮತ್ತು ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೊವಾ ವಿರುದ್ಧ ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.