ಟೆನಿಸ್‌ ಆಟಗಾರರಿಗೆ ₹ 45 ಕೋಟಿ ನೆರವು ಪ್ಯಾರಿಸ್‌: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಯಾವುದೇ ಟೂರ್ನಿಗಳಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಟೆನಿಸ್‌ ಆಟಗಾರರಿಗೆ ನೀಡಲು ಅಂದಾಜು ₹ 45 ಕೋಟಿ ನಿಧಿ ಸಂಗ್ರಹಿಸಿದ್ದಾಗಿ ವಿಶ್ವ ಟೆನಿಸ್‌ ಆಡಳಿತ ಮಂಡಳಿಗಳು ಹೇಳಿವೆ. ಈ ಕುರಿತು ಎಟಿಪಿ, ಡಬ್ಲ್ಯುಟಿಎ ಟೂರ್ಸ್‌, ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಹಾಗೂ ನಾಲ್ಕು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಸಂಘಟನಾ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿವೆ. ‘ಕೋವಿಡ್‌–19 ಪಿಡುಗಿನ ಕಾರಣ ಅನಿರೀಕ್ಷಿತ ತೊಂದರೆಗಳಿಗೆ ಸಿಲುಕಿರುವ ಆಟಗಾರರಿಗೆ, ಈ ಪರಿಹಾರ ನಿಧಿ ಅನುಕೂಲವಾಗಿದೆ’ ಎಂದು ಸಂಸ್ಥೆಗಳು ಹೇಳಿವೆ. ಜುಲೈ 13ರವರೆಗೆ ಟೂರ್ನಿಗಳು ಸ್ಥಗಿತಗೊಂಡಿವೆ. ಎಟಿಪಿ ಹಾಗೂ ಡಬ್ಲ್ಯುಟಿಎ ಸಿಂಗಲ್ಸ್‌ ಹಾಗೂ ಡಬಲ್ಸ್ ವಿಭಾಗಗಳಸುಮಾರು 800 ಆಟಗಾರರಿಗೆ ಆರ್ಥಿಕ ಬೆಂಬಲದ ಅಗತ್ಯವಿದೆ. ಆಟಗಾರರ ರ‍್ಯಾಂಕಿಂಗ್‌ ಹಾಗೂ ಗೆದ್ದ ಟೂರ್ನಿಗಳ ನಗದು ಬಹುಮಾನದ ಆಧಾರದ ಮೇಲೆ ಧನಸಹಾಯ ಮಾಡಲಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.