ಮ್ಯಾಚ್ ಫಿಕ್ಸಿಂಗ್: ಟೆನಿಸ್ ಅಟಗಾರನಿಗೆ ನಿಷೇಧ ಲಂಡನ್: ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಆರೋಪದಲ್ಲಿ ಸ್ಲೋವಾಕಿಯಾ ಮೂಲದ ಟೆನಿಸ್ ಆಟಗಾರ ಡೆಗಮಾರಾ ಬೆಸ್ಕೋವಾ ಅವರಿಗೆ 12 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. 2017ರಲ್ಲಿ ಅವರು ಮ್ಯಾಚ್‌ ಫಿಕ್ಸಿಂಗ್‌ನ ಐದು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.ಆದ್ದರಿಂದ ಅವರಿಗೆ ಈ ನಿಷೇಧ ಶಿಕ್ಷೆಯ ಜೊತೆಗೆ ₹ 25 ಲಕ್ಷ ದಂಡವನ್ನೂ ವಿಧಿಸಲಾಗಿದೆ ಎಂದು ಟೆನಿಸ್ ಇಂಟಿಗ್ರಿಟಿ ಯೂನಿಟ್ ತಿಳಿಸಿದೆ. ಬೆಸ್ಕೋವಾ ಮಹಿಳೆಯರ ಟೆನಿಸ್‌ ಸಿಂಗಲ್ಸ್‌ ರ‍್ಯಾಂಕಿಂಗ್‌ನಲ್ಲಿ 1117 ಮತ್ತು ಡಬಲ್ಸ್‌ನಲ್ಲಿ 777 ನೇ ಶ್ರೇಯಾಂಕ ಹೊಂದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.