ಅಮೆರಿಕದ ಜಿಮ್ನಾಸ್ಟ್ ಪಟುವಿನಿಂದ ಕಂಚಿನ ಪದಕ ವಾಪಸ್ ಪಡೆದ : ಕಾರಣ ಏನು? ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಜಿಮ್ನಾಸ್ಟ್ ಜೋರ್ಡಾನ್ ಚಿಲೀಸ್ ಅವರು ಗೆದ್ದಿದ್ದ ಕಂಚಿನ ಪದಕವನ್ನು ಇಂಟರನ್ಯಾಷನಲ್ ಒಲಿಂಪಿಕ್ ಕಮಿಟಿ () ವಾಪಸ್ ಪಡೆದುಕೊಂಡಿದೆ. ಶುಕ್ರವಾರ ನಡೆದಿದ್ದ ಫ್ಲೋರ್ ಎಕ್ಸ್‌ಸೈಜ್‌ ಜಿಮ್ನಾಸ್ಟ್‌ನಲ್ಲಿ ಜೋರ್ಡಾನ್ ಚಿಲೀಸ್ ಅವರು ಕಂಚಿನ ಪದಕ ಗೆದ್ದಿದ್ದರು. ಪಂದ್ಯದ ಫಲಿತಾಂಶ ಪ್ರಕಟಣೆ ವೇಳೆ ಗೊಂದಲವಾಗಿತ್ತು. ಈ ವೇಳೆ ಜೋರ್ಡಾನ್ ಅವರ ಕೋಚ್ ನಿರ್ಣಾಯಕರಿಗೆ ಮನವಿ ( ) ಸಲ್ಲಿಸಿದ್ದರು. ಮನವಿ ಅನುಸಾರ ಜೋರ್ಡಾನ್ ಚಿಲೀಸ್ ಅವರಿಗೆ ಮೂರನೇ ಸ್ಥಾನವನ್ನು ಘೋಷಣೆ ಮಾಡಲಾಗಿತ್ತು. ಆದರೆ, ಇದರ ವಿರುದ್ಧ ರೋಮೆನಿಯಾದ ಸ್ಪರ್ಧಾಳು ಐಒಸಿಯ () ಗೆ ದೂರು ಸಲ್ಲಿಸಿದ್ದರು. ‘ಒಲಿಂಪಿಕ್ ನಿಯಮಾವಳಿ ಪ್ರಕಾರ ಒಂದು ಬಾರಿ ಮನವಿ ಸಲ್ಲಿಸುವಾಗ ಒಂದು ನಿಮಿಷದಲ್ಲೇ ಸಲ್ಲಿಸಬೇಕು. ಆದರೆ, ಜೋರ್ಡಾನ್ ಚಿಲೀಸ್ ಕೋಚ್ ಒಂದು ನಿಮಿಷ ನಾಲ್ಕು ಸೆಕೆಂಡ್ ಸಮಯ ತೆಗೆದುಕೊಂಡು ಮನವಿ ಸಲ್ಲಿಸಿದ್ದರು. ಹಾಗಾಗಿ ನನಗೆ ಮೂರನೇ ಸ್ಥಾನ ಘೋಷಿಸಿ ಕಂಚಿನ ಪದಕ ನೀಡಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಕುರಿತು ತನಿಖೆ ನಡೆಸಿದ , ಜೋರ್ಡಾನ್ ಚಿಲೀಸ್ ಅವರಿಗೆ ಕಂಚಿನ ಪದಕ ನೀಡಿದ ನಿರ್ಧಾರವನ್ನು ರದ್ದು ಮಾಡಿದೆ. ಅಲ್ಲದೇ ಚೋರ್ಡಾನ್ ಅವರಿಂದ ಕಂಚಿನ ಪದಕ ವಾಪಸ್ ಪಡೆದಿದೆ. ಆದರೆ, ಈ ಕುರಿತು ಅಮೆರಿಕ ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ಕಮಿಟಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಸಿಎಎಸ್, ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ನಲ್ಲಿನ ವ್ಯಾಜ್ಯಗಳನ್ನು ವಿಚಾರಿಸುವ ಇಂಟರನ್ಯಾಷನಲ್ ಒಲಿಂಪಿಕ್ ಕಮಿಟಿಯ ನ್ಯಾಯಿಕ ಸಂಸ್ಥೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.