ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸತೀಶ್‌ ನಿರ್ಗಮನ ಯೊಕೊಹಾಮ (ಜಪಾನ್): ಭಾರತದ ಸತೀಶ್‌ ಕುಮಾರ್‌ ಕರುಣಾಕರನ್‌ ಗುರುವಾರ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಮೂರು ಗೇಮ್‌ಗಳ ಹೋರಾಟದ ನಂತರ ಹೊರಬಿದ್ದರು. 23 ವರ್ಷ ವಯಸ್ಸಿನ ಸತೀಶ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 21-18, 18-21, 8-21ರಿಂದ ವಿಶ್ವದ 40ನೇ ಕ್ರಮಾಂಕದ ಥಾಯ್ಲೆಂಡ್‌ನ ಕಾಂತಾಫೋನ್ ವಾಂಗ್‌ಚರೋನ್ ಅವರಿಗೆ ಮಣಿದರು. ಈ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. 70 ನಿಮಿಷ ನಡೆದ ಹೋರಾಟದ ಮೊದಲ ಗೇಮ್‌ನಲ್ಲಿ ಸತೀಶ್‌ ಮೇಲುಗೈ ಸಾಧಿಸಿದ್ದರು. ಆದರೆ, ಎರಡನೇ ಗೇಮ್‌ನಲ್ಲಿ ಥಾಯ್ಲೆಂಡ್‌ ಆಟಗಾರ ಪುಟಿದ್ದೆದ್ದು, ಸ್ಕೋರ್‌ ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲೂ ವಾಂಗ್‌ಚರೋನ್ ಗೆಲುವಿನೊಂದಿಗೆ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.