ಸ್ನೂಕರ್‌: ಪೋಲೆಂಡ್‌ನ ಮಿಚೆಲ್‌ಗೆ ಜಯ ಬೆಂಗಳೂರು: ಪೋಲೆಂಡ್‌ನ ಮಿಚೆಲ್ ಸ್ಜುಬಾರ್ಸಿಕ್ ಅವರು ಭವ್ಯಾ ಪಿಪಾಲಿಯಾ ಅವರಿಗೆ ಅಘಾತ ನೀಡಿ ಶುಭಾರಂಭ ಮಾಡಿದರು. ಶನಿವಾರ ಇಲ್ಲಿನ ರಾಜ್ಯ ಬಿಲಿಯರ್ಡ್‌ ಸಂಸ್ಥೆಯಲ್ಲಿ ಆರಂಭವಾದ ಐಬಿಎಸ್‌ಎಫ್‌ ವಿಶ್ವ ಜೂನಿಯರ್‌ ಸ್ನೂಕರ್‌ (17 ಮತ್ತು 21 ವರ್ಷ ದೊಳಗಿನವರ) ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಸ್ಜುಬಾರ್ಸಿಕ್ ಅವರು 85-28, 98-11, 74-20ರಿಂದ ಪಿಪಾಲಿಯಾ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.