ವಿಶ್ವ ಅಥ್ಲೆಟಿಕ್ಸ್‌: ಫೈನಲ್‌ಗೆ ಮಿಶ್ರ ರಿಲೆ ತಂಡ ಲಿಮಾ: ಜಯ್ ಕುಮಾರ್, ನೀರೂ ಪಾಠಕ್, ರಿಹಾನ್ ಚೌಧರಿ ಮತ್ತು ಸಾಂಡ್ರಾಮೋಳ್ ಸಾಬು ಅವರ ನ್ನೊಳಗೊಂಡ ಭಾರತದ 4x400 ಮೀ. ಮಿಶ್ರ ರಿಲೇ ತಂಡ, ವಿಶ್ವ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಫೈನಲ್ ತಲುಪಿದೆ. ಕಣದಲ್ಲಿದ್ದ ಒಟ್ಟು 20 ತಂಡಗಳಲ್ಲಿ ಭಾರತ ತಂಡ ಮೂರನೇ ಸ್ಥಾನ ಪಡೆದು ಅಂತಿಮ ಹಂತಕ್ಕೆ ಅರ್ಹತೆ ಪಡೆಯಿತು. ತಂಡ 3ನಿ.22.54 ಸೆ.ಗಳಲ್ಲಿ ಗುರಿಲುಪಿತು. ಆಸ್ಟ್ರೇಲಿಯಾ ತಂಡ (3:21.10) ಮೊದಲ ಸ್ಥಾನ ಗಳಿಸಿದರೆ, ಪೋಲೆಂಡ್‌ ತಂಡ (3:21.92) ಎರಡನೇ ಸ್ಥಾನ ಗಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.