ಕೊರಿಯಾ ಓಪನ್ ಬ್ಯಾಡ್ಮಿಂಟನ್: ಭಾರತದ ಅಭಿಯಾನಕ್ಕೆ ತೆರೆ ಸೋಲ್: ಅಷ್ಮಿತಾ ಚಲಿಹಾ, ಮಾಳವಿಕಾ ಬನ್ಸೋದ್ ಮತ್ತು ಆಕರ್ಷಿ ಕಶ್ಯಪ್ ಅವರು ಪ್ರಥಮ ಸುತ್ತಿನಲ್ಲಿ ಸೋಲುವುದರ ಮೂಲಕ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿತು. 53ನೇ ರ‍್ಯಾಂಕ್ ಆಟಗಾರ್ತಿ ಅಷ್ಮಿತಾ 8–21, 13–21ರಿಂದ 17ನೇ ಶ್ರೇಯಾಂಕದ ಆಟಗಾರ್ತಿ ಪಾನ್‌ಪೊವಿ ಚೋಚುವಾಂಗ್ ವಿರುದ್ಧ ಸೋತರು. ಮೊದಲ ಸುತ್ತಿನ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಆಕರ್ಷಿ 15–21, 15–21ರಿಂದ ಡೆನ್ಮಾರ್ಕಿನ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ ಪರಾಭವಗೊಂಡರು. ಇನ್ನೊಂದು ಪಂದ್ಯದಲ್ಲಿ ವಿಶ್ವ ನಂಬರ್ 41 ಮಾಳವಿಕಾ ಅವರು 21-18, 15-21, 17-21 ರಿಂದ ಡೆನ್ಮಾರ್ಕಿನ ಲೈನ್ ಹಾಜ್‌ಮಾರ್ಕ್ ಕೆಜೆರ್ಸಫೀಲ್ಡ್‌ ವಿರುದ್ಧ ನಿರಾಶೆ ಅನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಆಯುಷ್ ರಾಜ್‌ಗುಪ್ತಾ ಮತ್ತು ಶ್ರುತಿ ಸ್ವಾಯನ್ 7-21 12-21 ರಿಂದ ಕೊರಿಯಾದ ಕೊ ಸಂಗ್ ಯುನ್ ಮತ್ತು ಏಯಾಮ್ ಹೇ ವೊನ್ ವಿರುದ್ಧ ಸೋಲನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.