: ಶೂಟಿಂಗ್ ಮಿಶ್ರ ಡಬಲ್ಸ್‌ನಲ್ಲಿ ಅವನಿ ಲೇಖರಾ ಜೋಡಿ ಹೊರಕ್ಕೆ ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಕ್ರೀಡಾಕೂಟದಲ್ಲಿ ಮಗದೊಂದು ಪದಕ ಗೆಲ್ಲುವ ಶೂಟಿಂಗ್ ಪಟು ಅವನಿ ಲೇಖರಾ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಶೂಟಿಂಗ್ ಮಿಶ್ರ ಡಬಲ್ಸ್ 10 ಮೀ. ಏರ್ ರೈಫಲ್ ಪ್ರೋನ್ (ಎಸ್‌ಎಚ್1) ವಿಭಾಗದಲ್ಲಿ ಭಾರತದ ಅವನಿ ಲೇಖರಾ ಹಾಗೂ ಸಿದ್ದಾರ್ಥ ಬಾಬು ಜೋಡಿ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ. ಅವನಿ ಲೇಖರಾ 11ನೇ ಹಾಗೂ ಬಾಬು 28ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅವನಿ ಒಟ್ಟು 632.8 ಹಾಗೂ ಸಿದ್ದಾರ್ಥ 628.3 ಪಾಯಿಂಟ್ ಕಲೆ ಹಾಕಿದರು. ಶುಕ್ರವಾರ, ಮಹಿಳೆಯರ 10 ಮೀ. ಏರ್‌ ರೈಫಲ್ (ಎಸ್‌ಎಚ್‌ 1) ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಅವನಿ ಲೇಖರಾ ಇತಿಹಾಸ ಬರೆದಿದ್ದರು. ಆ ಮೂಲಕ ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದರು. 🇮🇳 : # 10m SH1 👇 & 10m SH1 💔 , , 11th 632.8. , 28th … ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.