ಫಜಲ್ ಅಲಿ, ಕಾಶ್ವಿಗೆ ಪ್ರಶಸ್ತಿ ಬೆಂಗಳೂರು: ಅಗ್ರ ಶ್ರೇಯಾಂಕದ ಮೀರ್ ಫಜಲ್ ಅಲಿ ಮತ್ತು ಎರಡನೇ ಶ್ರೇಯಾಂಕದ ಕಾಶ್ವಿ ಸುನಿಲ್ ಶುಕ್ರವಾರ ಮುಕ್ತಾಯಗೊಂಡ ಕೆಎಸ್‌ಎಲ್‌ಟಿಎ ಟ್ಯಾಲೆಂಟ್ ಸೀರಿಸ್‌ನ ತತ್ವಂ ಜೂನಿಯರ್ ಟೂರ್‌ನ 12 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕೆಎಸ್‌ಎಲ್‌ಟಿಎ ಆವರಣದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡಿನ ಫಜಲ್ ಅಲಿ ಸ್ಥಳೀಯ ಆಟಗಾರ ಲಿಖಿತ್ ಗೌಡ ಅವರನ್ನು6-0, 6-2ರಲ್ಲಿ ಮಣಿಸಿದರು. ಕಾಶ್ವಿ ಸುನಿಲ್ ಅಗ್ರ ಶ್ರೇಯಾಂಕದ ಮೇಘನಾ ಜಿ.ಡಿ ಎದುರು 6-2, 6-1ರಲ್ಲಿ ಗೆಲುವು ಸಾಧಿಸಿದರು. ಬಾಲಕರ ಡಬಲ್ಸ್‌ನಲ್ಲಿ ಮೀರ್ ಫಜಲ್ ಮತ್ತು ಶೌರ್ಯ ಕಲ್ಲಂಬಲ್ಲ ಜೋಡಿ ರನ್ನರ್ ಅಪ್‌ ಆಯಿತು. ತನಿಶ್ ವೇಪನಪಳ್ಳಿ ಮತ್ತು ಸ್ಟೀಫನ್ ಡೈಲನ್ ಜೋಡಿ 6-1, 6-1ರಲ್ಲಿ ಜಯ ಗಳಿಸಿ ಚಾಂಪಿಯನ್‌ ಆಯಿತು. ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಸೃಷ್ಟಿ ಕಿರಣ್ ಮತ್ತು ತನು ವಿಶ್ವಾಸ್ 2-6, 6-3 (10-8)ರಲ್ಲಿ ಗೆದ್ದು ಪ್ರಶಸ್ತಿ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.