: ಪದಕ ಪಟ್ಟಿಯಲ್ಲಿ ಭಾರತಕ್ಕೆ 18ನೇ ಸ್ಥಾನ; 29 ಪದಕ ವಿಜೇತರ ಪಟ್ಟಿ ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 29 ಪದಕಗಳನ್ನು ಪಡೆಯುವ ಮೂಲಕ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿತು. ಪದಕ ಪಟ್ಟಿಯಲ್ಲಿ ಭಾರತ 18ನೇ ಸ್ಥಾನ ಪಡೆಯಿತು. ಚೀನಾ 219 ಪದಕಗಳನ್ನು ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ, ಗ್ರೇಟ್‌ ಬ್ರಿಟನ್‌ 122, ಅಮೆರಿಕ 104 ಪದಕಗಳನ್ನು ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಭಾರತವು ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಪಡೆದು ಪ್ಯಾರಾಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆಯಿತು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗಳಿಸಿತ್ತು. ಈ ಸಲ 29 ಪದಕಗಳೊಂದಿಗೆ ಉತ್ತಮ ಸಾಧನೆ ಮಾಡಿದೆ. 1. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1(ಶೂಟಿಂಗ್): ಅವನಿ ಲೇಖರಾ -ಚಿನ್ನ 2. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1(ಶೂಟಿಂಗ್): ಮೋನಾ ಅಗರ್ವಾಲ್ –ಕಂಚು 3. ಮಹಿಳೆಯರ 100 ಮೀಟರ್ ಟಿ35 (ಅಥ್ಲೆಟಿಕ್ಸ್): ಪ್ರೀತಿ ಪಾಲ್ -ಕಂಚು 4. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1 (ಶೂಟಿಂಗ್): ಮನೀಶ್ ನರ್ವಾಲ್ -ಬೆಳ್ಳಿ 5. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1(ಶೂಟಿಂಗ್): ರುಬಿನಾ ಫ್ರಾನ್ಸಿಸ್ -ಕಂಚು 6. ಮಹಿಳೆಯರ 200 ಮೀಟರ್ ಟಿ35 (ಅಥ್ಲೆಟಿಕ್ಸ್): ಪ್ರೀತಿ ಪಾಲ್ -ಕಂಚು 7. ಪುರುಷರ ಹೈಜಂಪ್ ಟಿ47 (ಅಥ್ಲೆಟಿಕ್ಸ್): ನಿಶಾದ್ ಕುಮಾರ್ -ಬೆಳ್ಳಿ 8. ಪುರುಷರ ಡಿಸ್ಕಸ್ ಥ್ರೋ F56 (ಅಥ್ಲೆಟಿಕ್ಸ್): ಯೋಗೇಶ್ ಕಥುನಿಯಾ -ಬೆಳ್ಳಿ 9. ಪುರುಷರ ಸಿಂಗಲ್ಸ್ ಎಸ್ಎಲ್3 (ಬ್ಯಾಡ್ಮಿಂಟನ್): ನಿತೀಶ್ ಕುಮಾರ್ಗೆ –ಚಿನ್ನ 10. ಮಹಿಳಾ ಸಿಂಗಲ್ಸ್ ಎಸ್ಯು5 (ಬ್ಯಾಡ್ಮಿಂಟನ್): ತುಳಸಿಮತಿ ಮುರುಗೇಶನ್ -ಬೆಳ್ಳಿ 11. ಮಹಿಳಾ ಸಿಂಗಲ್ಸ್ ಎಸ್ಯು5 (ಬ್ಯಾಡ್ಮಿಂಟನ್): ಮನೀಷಾ ರಾಮದಾಸ್ -ಕಂಚು 12. ಪುರುಷರ ಸಿಂಗಲ್ಸ್ ಎಸ್ಎಲ್ 4 (ಬ್ಯಾಡ್ಮಿಂಟನ್): ಸುಹಾಸ್ ಯತಿರಾಜ್ -ಬೆಳ್ಳಿ 13. ಬಿಲ್ಲುಗಾರಿಕೆ ಮಿಶ್ರ ತಂಡ: ರಾಕೇಶ್ ಕುಮಾರ್/ಶೀತಲ್ ದೇವಿ -ಕಂಚು 14. ಪುರುಷರ ಜಾವೆಲಿನ್ ಥ್ರೋ F64 (ಅಥ್ಲೆಟಿಕ್ಸ್): ಸುಮಿತ್ ಆಂಟಿಲ್ -ಚಿನ್ನ 15. ಮಹಿಳಾ ಸಿಂಗಲ್ಸ್ ಎಸ್ಎಚ್ 6 (ಬ್ಯಾಡ್ಮಿಂಟನ್): ನಿತ್ಯ ಶ್ರೀ ಶಿವನ್ -ಕಂಚು 16. ಮಹಿಳೆಯರ 400 ಮೀಟರ್ ಟಿ20 (ಅಥ್ಲೆಟಿಕ್ಸ್): ದೀಪ್ತಿ ಜೀವನ್ಜಿ -ಕಂಚು 17. ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್): ಸುಂದರ್ ಸಿಂಗ್ ಗುರ್ಜರ್ -ಕಂಚು 18. ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್): ಅಜೀತ್ ಸಿಂಗ್-ಬೆಳ್ಳಿ 19. ಪುರುಷರ ಹೈ ಜಂಪ್ T63 (ಅಥ್ಲೆಟಿಕ್ಸ್) ಮರಿಯಪ್ಪನ್ ತಂಗವೇಲು -ಕಂಚು 20. ಪುರುಷರ ಹೈ ಜಂಪ್ ಟಿ63 (ಅಥ್ಲೆಟಿಕ್ಸ್): ಶರದ್ ಕುಮಾರ್ -ಬೆಳ್ಳಿ 21. ಪುರುಷರ ಶಾಟ್ ಪುಟ್ ಎಫ್46 (ಅಥ್ಲೆಟಿಕ್ಸ್): ಸಚಿನ್ ಖಿಲಾರಿ -ಬೆಳ್ಳಿ 22. ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ: ಹರ್ವಿಂದರ್ ಸಿಂಗ್ -ಚಿನ್ನ 23. ಪುರುಷರ ಕ್ಲಬ್ ಥ್ರೋ 51 (ಅಥ್ಲೆಟಿಕ್ಸ್): ಧರಂಬೀರ್ -ಚಿನ್ನ 24. ಪುರುಷರ ಕ್ಲಬ್ ಥ್ರೋ 51(ಅಥ್ಲೆಟಿಕ್ಸ್): ಪ್ರಣವ್ ಸೂರ್ಮಾ-ಬೆಳ್ಳಿ 25. ಪುರುಷರ ಜೂಡೋ 60 ಕೆಜಿ ವಿಭಾಗ: ಕಪಿಲ್ ಪರ್ಮಾರ್ –ಕಂಚು 26. ಪುರುಷರ ಹೈ ಜಂಪ್ ಟಿ64 (ಅಥ್ಲೆಟಿಕ್ಸ್): ಪ್ರವೀಣ್ ಕುಮಾರ್ -ಚಿನ್ನ 27. ಪುರುಷರ ಶಾಟ್ ಪುಟ್ ಎಫ್57 (ಅಥ್ಲೆಟಿಕ್ಸ್): ಹೊಕಾಟೊ ಸೆಮಾ -ಕಂಚು 28. ಮಹಿಳೆಯರ 200 ಮೀಟರ್ ಟಿ12 (ಅಥ್ಲೆಟಿಕ್ಸ್): ಸಿಮ್ರಾನ್ ಸಿಂಗ್ -ಕಂಚು 29. ಪುರುಷರ ಜಾವೆಲಿನ್ ಎಫ್41 (ಅಥ್ಲೆಟಿಕ್ಸ್): ನವದೀಪ್ ಸಿಂಗ್ -ಚಿನ್ನ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.