ಟೆನಿಸ್‌: ಪ್ರೀ ಕ್ವಾರ್ಟರ್‌ಗೆ ರಾಮಕುಮಾರ್‌ ಪಲೆಂಬಂಗ್‌: ಭಾರತದ ಟೆನಿಸ್‌ ಸ್ಪರ್ಧಿಗಳಾದ ರಾಮಕುಮಾರ್‌ ರಾಮನಾಥನ್‌ ಮತ್ತು ಅಂಕಿತಾ ರೈನಾ ಅವರು ಏಷ್ಯನ್‌ ಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಎರಡನೆ ಸುತ್ತಿನ ಹಣಾಹಣಿಯಲ್ಲಿ ರಾಮಕುಮಾರ್‌ 6–0, 7–6ರಲ್ಲಿ ಹಾಂಕಾಂಗ್‌ನ ವೊಂಗ್‌ ಹಾಂಗ್‌ ಕಿಟ್‌ ಅವರನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ 6–2, 6–0ರಲ್ಲಿ ಇಂಡೊನೇಷ್ಯಾದ ರಫಿಕಿ ಫಿತ್ರಿಯಾದಿ ಎದುರು ಗೆದ್ದರು. ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೆ ಸುತ್ತಿನ ಪೈಪೋಟಿಯಲ್ಲಿ ಅಂಕಿತಾ 6–2, 6–4ರಲ್ಲಿ ಬೀಟ್ರೈಸ್‌ ಗುಮುಲ್ಯಾ ಎದುರು ವಿಜಯಿಯಾದರು. ಕರ್ಮನ್ ಕೌರ್‌ ಥಂಡಿ 6–1, 6–0ರಲ್ಲಿ ಮಂಗೋಲಿಯಾದ ಜರ್ಗಲ್‌ ಅಲ್ಟಾನ್‌ಸರ್ನಾಯ್‌ ಅವರನ್ನು ಮಣಿಸಿದರು. ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ರಾಮಕುಮಾರ್‌ ಮತ್ತು ಸುಮಿತ್‌ ನಗಾಲ್‌ 6–1, 6–1ರಲ್ಲಿ ನೇಪಾಳದ ಅಭಿಷೇಕ್‌ ಬಟೋಲಾ ಮತ್ತು ಸಂರಕ್ಷ ಭಜ್ರಚಾರ್ಯ ಎದುರು ವಿಜಯಿಯಾದರು. ರುತುಜಾ ಬೋಸ್ಲೆ ಮತ್ತು ಪ್ರಾಂಜಲ ಯಡ್ಲಪಳ್ಳಿ 6–4, 3–6, 9–11ರಲ್ಲಿ ಥಾಯ್ಲೆಂಡ್‌ನ ಪೆಯಂಟರನ್‌ ಪ್ಲಿಪುಯೆಚ್‌ ಮತ್ತು ನಿಚಾ ಲೆರ್ಟ್‌ಪಿಟಕ್ಸಿಂಚಾಯ್‌ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.