ಕೆಟಿಪಿಪಿಎ–ಎಐಟಿಎ ಟೆನಿಸ್‌ ಚಾಂಪಿಯನ್‌ಷಿಪ್‌: ಫೈನಲ್‌ಗೆ ಫೈಸಲ್‌ ಬೆಂಗಳೂರು: ಅಗ್ರಶ್ರೇಯಾಂಕಿತ ಆಟಗಾರ ಫೈಸಲ್‌ ಕ್ವಾಮರ್‌ ಅವರು ಕೆಟಿಪಿಪಿಎ–ಎಐಟಿಎ ಟೆನಿಸ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ರಾಜಸ್ಥಾನದ ಫೈಸಲ್‌ 7–6, 7–6ರಲ್ಲಿ ನಿತೆನ್‌ ಕೀರ್ತನೆ ಎದುರು ಗೆದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ಫೈಸಲ್‌ 6–3, 6–7, 6–1ರಿಂದ ಬಿ.ಆರ್‌.ನಿಕ್ಷೇಪ್‌ ಅವರನ್ನು ಸೋಲಿಸಿದ್ದರು. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದ ಇಶಾಕ್‌ ಇಕ್ಬಾಲ್‌ 6–3, 7–6ರಲ್ಲಿ ನಿಕಿತ್‌ ರೆಡ್ಡಿ ಎದುರು ವಿಜಯಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.