ಮಾಂಟ್ರಿಯಲ್‌ ಟೆನಿಸ್‌ ಟೂರ್ನಿ: ಸಿಮೊನಾಗೆ ಜಯ ಮಾಂಟ್ರಿಯಲ್‌ :ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ರುಮೇನಿಯಾದ ಸಿಮೊನಾ ಹಲೆಪ್‌ ಅವರು ಇಲ್ಲಿ ನಡೆಯುತ್ತಿರುವ ಮಾಂಟ್ರಿಯಲ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಹಂತ ತಲುಪಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ರುಮೇನಿಯಾದ ಆಟಗಾರ್ತಿಯು 7–5, 6–1ರಿಂದ ಫ್ರಾನ್ಸ್‌ನ ಕರೊಲಿನ್‌ ಗಾರ್ಸಿಯಾ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಕರೊಲಿನ್‌ ಗಾರ್ಸಿಯಾ ಅವರು ಪೈಪೋಟಿ ನೀಡಿದರು. ಆದರೆ, ಸೆಟ್‌ ತಮ್ಮದಾಗಿಸಿಕೊಳ್ಳಲು ವಿಫಲವಾದರು. ಮನಮೋಹಕ ಸರ್ವ್‌ಗಳ ಮೂಲಕ ಸಿಮೊನಾ ಅವರು ಎದುರಾಳಿಯನ್ನು ಕಟ್ಟಿಹಾಕಿದರು. ಎರಡನೇ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದ ಹಲೆಪ್‌, ಪಂದ್ಯ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.