ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಸೆರೆನಾ ವಿಲಿಯಮ್ಸ್‌ ಫೈನಲ್‌ಗೆ ಲಗ್ಗೆ ನ್ಯೂಯಾರ್ಕ್‌ (ಎಎಫ್‌ಪಿ/ರಾಯಿಟರ್ಸ್‌):ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅಮೆರಿಕದಸೆರೆನಾ ವಿಲಿಯಮ್ಸ್‌ಲಾಟ್ವಿಯಾದ ಅನಸ್ತೇಸಿಜಾ ಸೆವಾಸ್ಟೋವಾ ಅವರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಆರ್ಥರ್‌ ಆ್ಯಷೆ ಅಂಗಳದಲ್ಲಿ ತವರಿನ ಅಭಿಮಾನಿಗಳ ಎದುರು ಆಡಿದ ಸೆರೆನಾ ಈ ಪಂದ್ಯದಲ್ಲಿ ನಿರೀಕ್ಷೆಯಂತೆ ಜಯ ದಾಖಲಿಸಿದರು. ಅನಸ್ತೇಸಿಜಾ ಸೆವಾಸ್ಟೋವಾ ಅವರನ್ನು 6–3, 6–0 ನೇರ ಸೆಟ್‌ಗಳಿಂದ ಸೋಲಿಸಿದರು. ' , # . ( ) ../v72KEIV2Gp ನಾಳೆ ನಡೆಯುವ ಪೈನಲ್‌ ಪಂದ್ಯದಲ್ಲಿ ಅಮೆರಿಕನ್ ಓಪನ್‌ ಟ್ರೋಫಿ ಗೆದ್ದರೆ ಸೆರೆನಾ 24 ಗ್ರ್ಯಾಂಡ್‌ಸಸ್ಲ್ಯಾಮ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಂತಾಗುತ್ತದೆ. ಕ್ವಾರ್ಟರ್ ‍ಫೈನಲ್‌ನಲ್ಲಿ ಸೆರೆನಾ ಅವರು ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದ್ದರು.ಟೂರ್ನಿಯಲ್ಲಿ ಸೆರೆನಾ17ನೇ ಶ್ರೇಯಾಂಕ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.