ಅಶಿಸ್ತಿನ ವರ್ತನೆ: ಸೆರೆನಾಗೆ ₹12 ಲಕ್ಷ ದಂಡ ನ್ಯೂಯಾರ್ಕ್‌: ಅಶಿಸ್ತು ತೋರಿರುವ ಕಾರಣ ಸೆರೆನಾ ವಿಲಿಯಮ್ಸ್‌ಗೆ ಯುನೈಟೆಡ್‌ ಸ್ಟೇಟ್ಸ್‌ ಟೆನಿಸ್‌ ಅಸೋಸಿಯೇಷನ್‌ (ಯುಎಸ್‌ಟಿಎ) ಭಾನುವಾರ ₹ 12.25 ಲಕ್ಷ ದಂಡ ವಿಧಿಸಿದೆ. ಅಂಪೈರ್‌ ಅವರನ್ನು ನಿಂದಿಸಿದ ಕಾರಣ ₹7.21 ಲಕ್ಷ, ಪಂದ್ಯದ ವೇಳೆ ಕೋಚ್‌ ಅವರಿಂದ ಸಲಹೆ ಪಡೆದಿದ್ದಕ್ಕೆ ₹ 2.88 ಲಕ್ಷ ಮತ್ತು ರ‍್ಯಾಕೆಟ್‌ ಮುರಿದಿದ್ದಕ್ಕೆ ₹2.16 ಲಕ್ಷ ದಂಡ ಹಾಕಲಾಗಿದೆ. ಇದನ್ನೂ ಓದಿ:ಅಮೆರಿಕ ಓ‍ಪನ್‌ ಟೂರ್ನಿ: ಅಂಪೈರ್‌ ರಾಮೋಸ್‌ ಜೊತೆ ಸೆರೆನಾ ಜಟಾಪಟಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.