ಟೆನಿಸ್‌: ಸೆಮಿಗೆ ಸ್ಲೊವೇಕಿಯಾದ ಮಾರ್ಟಿನ್‌ ಕ್ಲಿಜಾನ್‌ ಸೇಂಟ್‌ ಪೀಟರ್ಸ್‌ಬರ್ಗ್‌: ದಿಟ್ಟ ಆಟ ಆಡಿದ ಸ್ಲೊವೇಕಿಯಾದ ಮಾರ್ಟಿನ್‌ ಕ್ಲಿಜಾನ್‌ ಅವರು ಎಟಿಪಿ ಸೇಂಟ್‌ ಪೀಟರ್ಸ್‌ಬರ್ಗ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮಾರ್ಟಿನ್‌ 3–6, 7–5, 6–3ರಲ್ಲಿ ಕೆನಡಾದ ಡೆನಿಶ್‌ ಶಪೊವಲೊವ್‌ ಅವರನ್ನು ಮಣಿಸಿದರು. ಮೊದಲ ಸೆಟ್ ಗೆದ್ದ ಡೆನಿಶ್‌ ಮುನ್ನಡೆ ತಮ್ಮದಾಗಿಸಿಕೊಂಡರು. ಇದರಿಂದ ಮಾರ್ಟಿನ್‌ ಎದೆಗುಂದಲಿಲ್ಲ. ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಅಬ್ಬರಿಸಿದ ಅವರು ಕೆನಡಾದ ಆಟಗಾರನ ಸದ್ದಡಗಿಸಿದರು. ಎಂಟರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಸ್ಪೇನ್‌ನ ರಾಬರ್ಟೊ ಬಟಿಸ್ಟಾ ಅಗತ್‌ 7–6, 6–3ರ ನೇರ ಸೆಟ್‌ಗಳಿಂದ ಇಟಲಿಯ ಮಾರ್ಕೊ ಸೆಚಿನಾಟೊ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.