ಕ್ರೀಡಾ ಶಾಲೆ ಜೊತೆ ಬೋಪಣ್ಣ ಒಪ್ಪಂದ ಬೆಂಗಳೂರು: ಭಾರತದ ಹಿರಿಯ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ ಅವರು ಜೈನ್‌ ಸಮೂಹ ಆರಂಭಿಸಲು ಉದ್ದೇಶಿಸಿರುವ ‘ದಿ ಸ್ಪೋರ್ಟ್ಸ್‌ ಸ್ಕೂಲ್‌’ ಜೊತೆ ಒ‍ಪ್ಪಂದ ಮಾಡಿಕೊಂಡಿದ್ದಾರೆ. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೈನ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಚೆನ್‌ರಾಜ್‌ ರಾಯ್‌ಚಂದ್‌ ಮತ್ತು ಬೋಪಣ್ಣ ಅವರು ಒಪ್ಪಂದಕ್ಕೆ ಸಹಿ ಮಾಡಿದರು. ಒಪ್ಪಂದದ ‍ಪ್ರಕಾರ ಬೋಪಣ್ಣ ಟೆನಿಸ್‌ ಅಕಾಡೆಮಿಯ ಕೋಚ್‌ಗಳು ಸ್ಪೋರ್ಟ್ಸ್‌ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಕನಕಪುರ ರಸ್ತೆ ಬಳಿ ಇರುವ 15 ಎಕರೆ ಜಾಗದಲ್ಲಿ ₹200 ಕೋಟಿ ವೆಚ್ಚದಲ್ಲಿ ಸ್ಪೋರ್ಟ್ಸ್‌ ಸ್ಕೂಲ್‌ ನಿರ್ಮಿಸಲು ಜೈನ್‌ ಸಮೂಹ ನಿರ್ಧರಿಸಿದೆ. ಈ ಶಾಲೆಯಲ್ಲಿ ಟೆನಿಸ್‌ ಜೊತೆಗೆ ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌, ಕ್ರಿಕೆಟ್‌ ಮತ್ತು ಈಜು ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ಶಾಲೆ 2020ರಲ್ಲಿ ಕಾರ್ಯಾರಂಭ ಮಾಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.