ಟ್ಯಾಲೆಂಟ್‌ ಸಿರೀಸ್‌ ಟೆನಿಸ್‌ ಗೊವಿನ್‌, ಆಮೋದಿನಿಗೆ ಗೆಲುವು ಬೆಂಗಳೂರು: ಗೊವಿನ್‌ ಸೆಹ್ವಾಗ್ ಮತ್ತು ಆಮೋದಿನಿ ನಾಯಕ್‌, ನಮ್ಮ ಸ್ಪೋರ್ಟ್ಸ್‌–ಎಟಿಎ 16 ವರ್ಷದೊಳಗಿನವರ ಟ್ಯಾಲೆಂಟ್‌ ಸಿರೀಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ನರಾಗಿ ಹೊರಹೊಮ್ಮಿದರು. ನಮ್ಮ ಸ್ಪೋರ್ಟ್ಸ್‌ ಅಕಾಡೆಮಿ ಅಂಗಳದಲ್ಲಿ ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಗೊವಿನ್‌ ಸೆಹ್ವಾಗ್‌ 6–3, 6–2ರಿಂದ ಸಾಯಿ ಅದಿತ್‌ ಅವರನ್ನು ಮಣಿಸಿದರು. ಬಾಲಕಿಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಆಮೋದಿನಿ 6–3, 7–5ರಿಂದ ವಿದ್ಯುಲ್‌ ಮಣಿಕಾಂತಿ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.