ಮಣಿಕಾ ಬಾತ್ರಾಗೆ ‘ಸ್ಟಾರ್‌’ ಪಟ್ಟ ನವದೆಹಲಿ: ಮಣಿಕಾ ಬಾತ್ರಾ ಅವರು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ (ಐಟಿಟಿಎಫ್) ನೀಡುವ ‘ಬ್ರೇಕ್‌ ಥ್ರೂ ಟೇಬಲ್ ಟೆನಿಸ್ ಸ್ಟಾರ್’ ಪ್ರಶಸ್ತಿ ಗಳಿಸಿದ್ದಾರೆ. ದಕ್ಷಿಣ ಕೊರಿಯಾದ ಇಂಚೇನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ‘ಈ ಪ್ರಶಸ್ತಿ ಪಡೆಯುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. 2018 ನನಗೆ ಬಹಳ ಖುಷಿ ತಂದ ವರ್ಷವಾಗಿದೆ. ಹಲವು ಯಶಸ್ಸುಗಳನ್ನು ಸಾಧಿಸಲು ಸಾಧ್ಯವಾಯಿತು’ ಎಂದು ಮಣಿಕಾ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.