ರಾಷ್ಟ್ರೀಯ ಟೇಬಲ್‌ ಟೆನಿಸ್‌: ಕರ್ನಾಟಕ ತಂಡ ಪ್ರಕಟ ಬೆಂಗಳೂರು: ಚಂಡೀಗಡದಲ್ಲಿ ಇದೇ 18ರಿಂದ 23ರವರೆಗೆ ನಡೆಯಲಿರುವ ರಾಷ್ಟ್ರೀಯ ಕೆಡೆಟ್ ಮತ್ತು ಸಬ್‌ ಜೂನಿಯರ್ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವ ಕರ್ನಾಟಕ ತಂಡಗಳನ್ನು ಭಾನುವಾರ ಪ್ರಕಟಿಸಲಾಗಿದೆ. ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆ ಪ್ರಕಟಿಸಿರುವ ತಂಡಗಳು ಇಂತಿವೆ; ಕೆಡೆಟ್‌ ವಿಭಾಗ: ಬಾಲಕಿಯರು: ಎ.ನಿಹಾರಿಕಾ, ಸಾನ್ವಿ ಪಂಡಿತ್‌, ನೀತಿ ಅಗರ್‌ವಾಲ್‌; ಬಾಲಕರು; ವರುಣ್‌ ಬಿ ಕಶ್ಯಪ, ಅಭಿನವ್‌ ಕೆ ಮೂರ್ತಿ, ಹೃಷಿಕೇಶ್‌, ಸಿದ್ದಾಂತ್‌ ವಾಸನ್‌; ಸಬ್‌–ಜೂನಿಯರ್‌: ಬಾಲಕಿಯರು: ಯಶಸ್ವಿನಿ ಘೋರ್ಪಡೆ, ಅನರ್ಘ್ಯಾ ಮಂಜುನಾಥ್‌, ಕರುಣಾ ಜಿ, ತೃಪ್ತಿ ಪುರೋಹಿತ್‌; ಬಾಲಕರು: ಕೆ.ಜೆ. ಆಕಾಶ್‌, ಸುಜನ್‌ ಆರ್‌ ಭಾರದ್ವಾಜ್‌, ಪಿ.ವಿ. ಶ್ರೀಕಾಂತ್‌ ಕಶ್ಯಪ, ಸಮ್ಯಕ್‌ ಕಶ್ಪಪ. ಕೋಚ್‌ಗಳು: ಸುರೇಶ್‌ ಬಾಬು, ಅನಿರ್ಬನ್‌, ಅನ್ಶುಮನ್‌ ರಾಯ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.