ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆರೆನಾ, ನಡಾಲ್ ಕಣಕ್ಕೆ ಮೆಲ್ಬರ್ನ್‌: ಸೆರೆನಾ ವಿಲಿಯಮ್ಸ್, ರಫೆಲ್ ನಡಾಲ್‌ ಮತ್ತು ಆ್ಯಂಡಿ ಮರ್ರೆ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವುದು ಖಚಿತವಾಗಿದೆ. 2017ರಲ್ಲಿ ಪ್ರಶಸ್ತಿ ಗೆದ್ದಿದ್ದ ಸೆರೆನಾ, ಗರ್ಭಿಣಿಯಾಗಿದ್ದ ಕಾರಣ ಕಳೆದ ವರ್ಷ ಆಡಿರಲಿಲ್ಲ. ವಿಂಬಲ್ಡನ್ ಮತ್ತು ಅಮೆರಿಕ ಓಪನ್‌ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರೂ ಪ್ರಶಸ್ತಿ ಗೆಲ್ಲಲು ಆಗಿರಲಿಲ್ಲ. ನಡಾಲ್ ಮತ್ತು ಮರ್ರೆ ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ಯಾವುದೇ ಟೂರ್ನಿಗಳಲ್ಲಿ ಕಣಕ್ಕೆ ಇಳಿದಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.