ಟೆನಿಸ್‌: ಎರಡನೇ ಸುತ್ತಿಗೆ ಕಿಕಿ ಬೆರ್ಟನ್ಸ್‌ ಸಿಡ್ನಿ: ಹಾಲೆಂಡ್‌ನ ಕಿಕಿ ಬೆರ್ಟನ್ಸ್‌ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಬರ್ನಾಡಾ ಪೇರ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಸೋಮವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಬೆರ್ಟನ್ಸ್‌, 7–5, 6–4ರಿಂದ ಅಮೆರಿಕದ ಬರ್ನಾಡಾ ಅವರನ್ನು ಮಣಿಸಿದರು. ಆರಂಭಿಕ ಸೆಟ್‌ನಲ್ಲಿ ಉತ್ತಮ ಪೈಪೋಟಿ ಕಂಡುಬಂದಿತು. ಟೈಬ್ರೇಕರ್‌ನಲ್ಲಿ ಈ ಸೆಟ್‌ನ ಫಲಿತಾಂಶವು ನಿರ್ಧಾರವಾಯಿತು. ಬೆರ್ಟೆನ್ಸ್‌ ಅವರು ಎರಡನೇ ಸುತ್ತಿನಲ್ಲಿ ಗಾರ್ಬೈನ್‌ ಮುಗುರುಜಾ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡೆ ಮಿನೌರ್‌ ಅವರು 6–4, 6–3 ರಿಂದ ಸರ್ಬಿಯಾದ ದೂಸನ್‌ ಲಾಜೊವಿಕ್‌ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.