ಟೆನಿಸ್‌: ತರುಣ್‌, ಸನಾಗೆ ಪ್ರಶಸ್ತಿ ಬೆಂಗಳೂರು: ಕರ್ನಾಟಕದ ತರುಣ್‌ ರವಿ ಹಾ‌ಗೂ ಸನಾ ಸೇಶ್‌, 10 ವರ್ಷದೊಳಗಿ ನವರ ಎಐಟಿಎ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದರು. ಭಾನುವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ತರುಣ್‌ ರವಿ, 4–2, 4–3ರಲ್ಲಿ ಡ್ಯಾಲನ್‌ ರೆಮೆಡಿಸ್‌ ಅವರನ್ನು ಮಣಿಸಿದರು. ಸನಾ 4–0 1–4, 4–1ರಲ್ಲಿ ಮರಿಯಮ್‌ ಕಾರ್ನೆಲಿಯೊ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.